ಕರ್ಮ ಎಂದರೇನು? ಕರ್ಮದ ಫಲವೇನು? ಕರ್ಮಾನುಸಾರ ನಡೆಯಬೇಕೆ?

ಕರ್ಮ ಎನ್ನುವ ಒಂದು ಅತೀಂದ್ರಿಯ ಪದ, ನಮ್ಮ ಇಂದ್ರಿಯಗಳಿಗೆ ನಿಲುಕದ್ದು. ನಮ್ಮ ಕ್ರಿಯೆಯು(ಕರ್ಮ) ಅದಕ್ಕೆ ತಕ್ಕಂತೆ ಫಲ ಪಡೆಯುತ್ತದೆ.

ಇದಕ್ಕೊಂದು ಉದಾಹರಣೆ ಮಹಾಭಾರತದ ಕುರುಕ್ಷೇತ್ರ ಯುದ್ಧದಲ್ಲಿ ಸಿಗುತ್ತದೆ. ಮರಣಶಹ್ಯೆಯಲ್ಲಿ ಮಲಗಿದ್ದ ಭಿಷ್ಮರು, ಕೃಷ್ಣನನ್ನು ಕುರಿತು ಕೇಳುತ್ತಾರೆ.

ನನ್ನ ಹಿಂದಿನ 72 ಜನ್ಮಗಳನ್ನು ಅವಲೋಕಿಸಿದೆ. ಯಾವ ಜನ್ಮದಲ್ಲೂ ನಾನು ಇಂತಹ ನೋವು ಅನುಭವಿಸುವಂತಹ ಯಾವ ಪಾಪವನ್ನು ಸಹ ಮಾಡಿಲ್ಲ. ಆದರೂ ನನಗೇಕೆ ಇಂತಹ ಘೋರ ಶಿಕ್ಷೆ  ಎಂದು ಕೇಳುತ್ತಾರೆ.

ಆಗ ಕೃಷ್ಣ ಹೇಳುವನು ನಿನ್ನ  73ನೇ ಜನ್ಮದಲ್ಲಿ ಬಾಲಕನಾಗಿದ್ದಾಗ ಆಟವಾಡುತ್ತ ತಿಳಿಯದೆ ಒಂದು ಕೀಟಕ್ಕೆ ಮುಳ್ಳಿನಿಂದ ಚುಚ್ಚಿದ್ದೆ. ಆ  ಕರ್ಮದ ಫಲವನ್ನು ನೀನು ಈಗ ಅನುಭವಿಸುತ್ತಿರುವೆ  ಎನ್ನುತ್ತಾನೆ

ಕೃಷ್ಣನ ಮಾತು ಕೇಳಿ ಭೀಷ್ಮನು ನೋವಿನಲ್ಲೂ, ಚಿಂತನೆಯಲ್ಲಿ ತೊಡಗುತ್ತಾರೆ. ಯಾವ ಕರ್ಮವನ್ನು ಮಾಡದೇ ಇದ್ದರೇ, ಕರ್ಮದ ಬಂಧನಕ್ಕೆ ಸಿಗುವುದಿಲ್ಲ. ಆದರೆ ಕರ್ಮ ಮಾಡದೇ ವಿಧಿಯಿಲ್ಲ. ತಕ್ಕಂತೆ ಪಾಪದ ಕರ್ಮ ಮಾಡಿದರೆ ಪಾಪದ ಫಲ, ಪುಣ್ಯದ ಕರ್ಮ ಮಾಡಿದರೆ ಪುಣ್ಯದ ಫಲ. ಹೀಗೆ ಕರ್ಮದ ಬಂಧನದಲ್ಲಿ ಸಿಲುಕುತ್ತಾನೆ.

ಸಂಸ್ಕೃತದಲ್ಲಿ

“ಕರ್ಮಣಾ ಜಾಯತೇ ಜಂತು

ಕರ್ಮಣೇವಾ ವಿಥೀಯತೇ |

ಸುಖಂ ದುಃಖಂ ಭಯಂ ಕ್ಷೇಮಂ

ಕರ್ಮಣ್ಯೇವಂ ಭಿವದ್ಯತೇ”

ಎನ್ನುತ್ತಾರೆ. ಅಂದರೆ ಸುಖ, ದುಃಖ ಭಯ, ಕ್ಷೇಮಗಳ ಕರ್ಮಕ್ಕೆ ಅನುಸಾರವಾಗಿರುತ್ತದೆ.

Leave a Comment

Your email address will not be published. Required fields are marked *